ಪಾಲಿಕೆಗೆ ಕಸ ಸಂಗ್ರಹಣಾ ಆಟೋ ಟಿಪ್ಪರ್ ದಾನ

17-ಅಕ್ಟೋಬರ್-2009 :  ಬಳ್ಳಾರಿ  ನಗರ ಶಾಸಕರು ಹಾಗೂ ರಾಜ್ಯ ಹಾಲು ಒಕ್ಕೂಟದ ಅಧ್ಯಕ್ಷರಾದ ಜಿ.ಸೋಮಶೇಖರರೆಡ್ಡಿ ಯವರು ಮಹಾನಗರಪಾಲಿಕೆಗೆ ಎರಡು ಕಸ ಎತ್ತುವ ಆಟೋ ಟಿಪ್ಪರ್ ಗಳನ್ನು ವಿಶ್ವಭಾರತಿ ಕಲಾನಿಕೇತನ ಅವರ ಹೆಸರಿನಲ್ಲಿ ರೂ.4.30 ಲಕ್ಷ ವೆಚ್ಚದಲ್ಲಿ ವಾಹನಗಳನ್ನು ಪಾಲಿಕೆಗೆ ದಾನವಾಗಿ ನೀಡಿದರು.  ಬಳ್ಳಾರಿ ನಗರದಲ್ಲಿ ಕಸ ಎತ್ತಲು ಚಿಕ್ಕ-ಚಿಕ್ಕ ಸಂದುಗಳಲ್ಲಿ ಈ ಆಟೋ ಕಸ ಎತ್ತಲು ಸುಲಭವಾತಿರುತ್ತದೆಂದು ಹಾಗೂ ಸುಮಾರು 500 ಕೆ.ಜಿ. ಕಸವನ್ನು ಹೊತ್ತುಕೊಂಡು ಹೋಗಲು ಅನುಕೂಲವಾತಿರುತ್ತದೆಂದು ಒಂದು ಲೀಟರ್ ಗೆ 36 ಕಿ.ಮೀ. ಚಲಿಸುತ್ತದೆಂದು ತಿಳಿಸಿದರು.

  ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತರಾದ ಎಂ.ತಿಮ್ಮಪ್ಪ ರವರು ಹಾಗೂ ಮಹಾನಗರ ಪಾಲಿಕೆಯ ಮಹಾಪೌರರಾದ ಕೆ.ಬಸವರಾಜ್ ಹಾಗೂ ಸ್ಥಾಯಿ ಸಮಿತಿಯ ಅಧ್ಯಕ್ಷರುಗಳಾದ ಪದ್ಮಾವತಿ ಯವರು, ಇಬ್ರಾಹಿಂ ಬಾಬುರವರು, ಗೋವಿಂದರಾಜುಲು ಹಾಗೂ ಸದಸ್ಯರುಗಳಾದ ಮಲ್ಲನಗೌಡ ರವರು ಉಪಸ್ಥಿತರಿದ್ದರು.

___________________________________________________________

ಬಳ್ಳಾರಿ ನಗರದಲ್ಲಿ ಮಳೆರಾಯನ ಆರ್ಭಟ

05-ಅಕ್ಟೋಬರ್-2009 :  ಬಳ್ಳಾರಿ ನಗರದಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ಸುರಿದ ನಿರಂತರ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದ ನಷ್ಟವಾಗಿದೆ ಹಾಗೂ ಸಾರ್ವಜನಿಕರು ತತ್ತರಿಸುವಂತಾಗಿದೆ.  ವಾಹನ ಸಂಚಾರಕ್ಕೆ ತುಂಬಾ ಅಡಚಣೆಯುಂಟಾಗಿದೆ.  ಕೆಲವು ಪ್ರದೇಶಗಳಲ್ಲಿ ರಸ್ತೆಗಳಲ್ಲಿ ಹಾಗೂ ಮನೆಗಳಲ್ಲಿ ಮಳೆ ನೀರು ಅಪಾರ ಪ್ರಮಾಣದಲ್ಲಿ ಹರಿದು ಬಂದಿರುವುದರಿಂದ ಜನರ ಜೀವನ ಅಸ್ತವ್ಯಸ್ತವಾಗಿದೆ.   More photos

_________________

63ನೇ ಸ್ವಾತಂತ್ರ ದಿನಾಚರಣೆ

15-ಆಗಸ್ಟ್-2009 :  63ನೇ ಸ್ವಾತಂತ್ರ ದಿನಾಚರಣೆಯನ್ನು ಮಹಾನಗರಪಾಲಿಕೆಯಲ್ಲಿ ಮಾನ್ಯ ಮಹಾಪೌರರು ಧ್ವಜಾರೋಹಣದೊಂದಿಗೆ ಆಚರಿಸಲಾಯಿತು.  ಈ ಸಂದರ್ಭದಲ್ಲಿ ಮಾನ್ಯ ಕರ್ನಾಟಕ ಹಾಲಿನ ಒಕ್ಕೂಟದ ಅಧ್ಯಕ್ಷರು ಹಾಗೂ ಶಾಸಕರು ಬಳ್ಳಾರಿ ನಗರ ಶ್ರೀ ಜಿ.ಸೋಮಶೇಖರರೆಡ್ಡಿರವರು, ಪಾಲಿಕೆ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

INDEPENDENCE DAY celebration in the Corporation 
 

15-Aug-2009:  63st anniversary of Independence day was celebrated in Bellary City Corporation premises. The Corporation Mayor hoisted the flag.  KMF Chairman and Bellary City MLA Sri.G.Somashekhar Reddy, Corporators and office staff were also present on the occasion. The event was also celebrated at Narayana Rao Park, Fort booster and Sanitation office near first gate.

____________________________________________

ಪಾಲಿಕೆಯ ಸಾಮಾನ್ಯ ಸಭೆ

 15-06-2009: ಬಳ್ಳಾರಿ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಕರವನ್ನು ಪಾವತಿಸಲು ನಾಗರೀಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಗರದಲ್ಲಿ ಇನ್ನೂ 3-4 ಪ್ರದೇಶಗಳಲ್ಲಿ ನೀರಿನ ಕರ ಪಾವತಿ ಕೇಂದ್ರ ತೆರೆಯಲು ಹಾಗೂ ಕರವಸೂಲಿ ಕಾರ್ಯವನ್ನು ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳಲು ಖಾಸಗಿ ಗುತ್ತಿಗೆದಾರರಿಗೆ ವಹಿಸಲು ನಗರಪಾಲಿಕೆಯು ಒಪ್ಪಿಗೆ ನೀಡಿದೆ.  ಮಹಾನಗರಪಾಲಿಕೆಯ ಸಭಾಂಗಣದಲ್ಲಿಂದು ಮಧ್ಯಾಹ್ನ ನಡೆದ ಸಾಮಾನ್ಯ ಸಭೆಯಲ್ಲಿ, ಮಹಾಪೌರರ ಅನುಮತಿಯ ಮೇರೆಗೆ ಇತರೆ ವಿಷಯಗಳ ಬಗ್ಗೆ ನಡೆದ ಚರ್ಚೆಯ ಸಂದರ್ಭದಲ್ಲಿ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಬಾಬು ಅವರು ಈ ಕುರಿತು ಪ್ರಸ್ತಾವಿಸಿ ನಗರದಲ್ಲಿ 42 ಸಾವಿರ ಅಧಿಕೃತ ನಳಗಳ ಸಂಪರ್ಕಗಳಿವೆ.  ಅಂತೆಯೇ ಸಾವಿರಾರು ಅನಧಿಕೃತ ನಲ್ಲಿಗಳ ಸಂಪರ್ಕಗಳಿದ್ದು, ಅವುಗಳನ್ನು ಸಕ್ರಮಗೊಳಿಸಿ, ದಂಡ ಕಟ್ಟಿಸಿಕೊಳ್ಳುವ ಹಾಗೂ ವಿದ್ಯುತ್ ಶುಲ್ಕ ಪಾವತಿಸುವ ಮಾದರಿಯಲ್ಲಿ ಪ್ರತಿ ತಿಂಗಳೂ ನೀರಿನ ಸಂಪರ್ಕ ಪಾವತಿಸಲು, ಶುಲ್ಕ ವಸೂಲಿ ಮಾಡಲು ಅನುವಾಗುವಂತೆ ಖಾಸಗಿಯವರಿಗೆ ಗುತ್ತಿಗೆ ನೀಡಲು ತಿಳಿಸಿದಾಗ ಸಭೆಯು ಒಪ್ಪಿಗೆ ಸೂಚಿಸಿತು.

ಮೋಕಾ ಬಳಿ ಮತ್ತೊಂದು ಕೆರೆ ನಿರ್ಮಾಣಕ್ಕೆ ನಿರ್ಧಾರ, ವಿದ್ಯುತ್ ಕಣ್ಣಾ ಮುಚ್ಚಲೆ ಯಾಟದ ಬಗ್ಗೆ ಪಾಲಿಕೆ ಸಭೆಯಲ್ಲಿ ಸದಸ್ಯರ ತೀವ್ರ ಅಸಮಾಧಾನ ಹಾಗೂ ಇನ್ನೀತರೆ ವಿಷಯಗಳ ಬಗ್ಗೆ ಚರ್ಚಿಸಲಾಯಿತು.  ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲುರವರು, ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಮಹಾಪೌರರು ಬಸವರಾಜ್, ಉಪಮಹಾಪೌರರು ವಿಜಯಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷರುಗಳು, ಇತರೆ ಸದಸ್ಯರುಗಳು, ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.

____________________________________________

ಪಾಲಿಕೆಯಲ್ಲಿ ಹೊಸ ಸ್ಥಾಯಿ ಸಮಿತಿಗಳು ರಚನೆ

 04-06-2009: ಬಳ್ಳಾರಿ ನಗರ ಪಾಲಿಕೆಯಲ್ಲಿ ನಾಲ್ಕು ಹೊಸ ಸ್ಥಾಯಿ ಸಮಿತಿಗಳು ರಚನೆಯಾಗಿದ್ದು ವಿವರಗಳು ಕೆಳಕಂಡಂತಿವೆ.

            

C.IBRAHIM            G.PADMAVATHI      M.GOVINDA     K.S.DIWAKAR     Taxation & Appeal      Health             City Planning      Accounts

 Committee              Committee          Committee        Committee    Chairman                Chairman            Chairman          Chairman

 

____________________________________________
Expression of Interest - Landfill Site

ಬಳ್ಳಾರಿ ಮಹಾನಗರ ಪಾಲಿಕೆ: 4.07 ಕೋಟಿ ರೂ.ಗಳ

ಉಳಿತಾಯದ ಬಜೆಟ್ ಮಂಡನೆ

28-02-2009: ಬಳ್ಳಾರಿ ಮಹಾನಗರ ಪಾಲಿಕೆಯ ನೂತನ ಮಹಾಪೌರರಾದ ಕೆ.ಬಸವರಾಜ್ ಅವರು 2009- 10ನೇ ಸಾಲಿನಲ್ಲಿ 4.07 ಕೋಟಿ ರೂಪಾಯಿಗಳ ಉಳಿತಾಯದ ಆಯವ್ಯಯ ಮುಂಗಡ ಪತ್ರವನ್ನು ಇಂದು ಮಧ್ಯಾಹ್ನ ಮಂಡಿಸಿದರು. ಬಳ್ಳಾರಿ ನಗರ ಪಾಲಿಕೆಯ ನೂತನ ಮೇಯರ್ ಆಗಿ ಆಯ್ಕೆಯಾದ ನಂತರ ನಡೆದ Budget 2009-10 Mayor speechಸಭೆಯಲ್ಲಿ 2009- 10ನೇ ಸಾಲಿನ ಆಯವ್ಯಯ ಮುಂಗಡ ಪತ್ರವನ್ನು ಅಚ್ಚ ಕನ್ನಡದಲ್ಲಿ ನಿರ್ಗಳವಾಗಿ ಓದುವ ಮೂಲಕ 4.07 ಕೋಟಿ ರೂ.ಗಳ ಉಳಿತಾಯದ ಬಜೆಟ್ ಅನ್ನು ಕೆ.ಬಸವರಾಜ್ ಮಂಡಿಸಿದ್ದುದು ವಿಶೇಷವಾಗಿತ್ತು.

         ಆರಂಭದಲ್ಲಿ ಶಿಲ್ಕು 20,12,31,339 ರೂ.ಗಳು, ಆದಾಯ 306,82,52,714 ರು.ಗಳು ಒಟ್ಟು ಜಮಾ 326,94,84,053 ರೂ.ಗಳಾಗಿದ್ದರೆ, ಒಟ್ಟು ವೆಚ್ಚ 322,87,87,813 ರೂ.ಗಳ (4.07 ಕೋಟಿ ರೂ.) ಉಳಿತಾಯದ ಬಜೆಟ್ ಅನ್ನು ಮಂಡಿಸಿದರು.

          2009- 10ನೇ ಸಾಲಿನಲ್ಲಿ ಮನೆ ಕಂದಾಯದಿಂದ 7 ಕೋಟಿ ರೂ.ಗಳನ್ನು ಹಾಗೂ ಖಾತಾ ವರ್ಗಾವಣೆ ಶುಲ್ಕದಿಂದ 20 ಲಕ್ಷ ರೂ.ಗಳನ್ನು ನಿರೀಕ್ಷಿಸಲಾಗಿದೆ.  ಆರೋಗ್ಯ ಶಾಖೆಯಿಂದ ಸ್ವಂತ ಮೂಲಗಳಿಂದ ಪರವಾನಿಗೆ ಶುಲ್ಕ 40 ಲಕ್ಷ ರೂ. ಹಾಗೂ ಜಾಹೀರಾತು ಶುಲ್ಕ 25 ಲಕ್ಷಗಳು ನಿರೀಕ್ಷಿಸಲಾಗಿದೆ. ಆರೋಗ್ಯ ಇಲಾಖೆಗೆ ಪ್ರತ್ಯೇಕವಾಗಿ ಒಂದು ಜೆಸಿಬಿಯಂತ್ರವನ್ನು ಹಾಗು ನಗರದ ರಸ್ತೆಗಳ ಪಕ್ಕದಲ್ಲಿರುವ ಚರಂಡಿಗಲ ಹೂಳು ತೆಗೆಯಲು ಕಂಟೈನರ್ ಗಳನ್ನು ಕಾಯ್ದಿರಿಸಲಾಗಿದೆ ಎಂದು ಮೇಯರ್ ಬಸವರಾಜ್ ಸಭೆಗೆ ತಿಳಿಸಿದರು.

____________________________________________

ಬಳ್ಳಾರಿ ಮಹಾನಗರ ಪಾಲಿಕೆ: ನೂತನ ಮಹಾಪೌರರಾಗಿ ಕೆ.ಬಸವರಾಜ್, ಉಪಮಹಾಪೌರರಾಗಿ ವಿಜಯಮ್ಮ ರಾಮಣ್ಣ ಅವಿರೋಧ ಆಯ್ಕೆ

28-02-2009: ಬಳ್ಳಾರಿ ಮಹಾನಗರ ಪಾಲಿಕೆಯ ಎರಡನೇ ವರ್ಷದ ಅವಧಿಯ ಮಹಾಪೌರ ಹಾಗೂ ಉಪಮಹಾಪೌರರ ಆಯ್ಕೆಗಾಗಿ ಇಂದು ಚುನಾವಣೆ ನಡೆದು, ನುತನ ಮೇಯರ್, ಉಪಮೇಯರ್ ರ ಆಯ್ಕೆ ಅವಿರೋಧವಾಗಿ ನಡೆಯಿತು.  ನೂತನ ಮೇಯರ್ ಆಗಿ ಕೆ.ಬಸವರಾಜ್, ಉಪಮೇಯರ್ ರಾಗಿ ಶ್ರೀಮತಿ ವಿಜಯಮ್ಮ ರಾಮಣ್ಣ ನವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

      ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ, ರಾಜ್ಯದ ಪ್ರಮುಖ ಬಿಜೆಪಿ ನಾಯಕ, ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ, ಕಂದಾಯ ಸಚಿವ ಜಿ.ಕರುಣಾಕರರೆಡ್ಡಿ, ಆರೋಗ್ಯ ಸಚಿವ ಬಿ.ಶ್ರೀರಾಮುಲು, ಬಳ್ಳಾರಿ ಶಾಸಕ ಜಿ.ಸೋಮಶೇಖರರೆಡ್ಡಿ ಮತ್ತಿತರರು ಸೇರಿ, ಪಾಲಿಕೆ ಸದಸ್ಯರುಗಳ ಅಭಿಪ್ರಾಯ ಪಡೆದು ಚರ್ಚಿಸಿ, ತೆಗೆದುಕೊಂಡ ಒಮ್ಮತದ ನಿರ್ಣಯದಂತೆ ಪಾಲಿಕೆಯ ನೂತನ ಮೇಯರ್- ಉಪಮೇಯರ್ ರ ಆಯ್ಕೆ ಸಲೀಸಾಗಿ, ಸುಗಮವಾಗಿ ನಡೆಯಿತು.

       ಮೇಯರ್ ಸ್ಥಾನವು ಸಾಮಾನ್ಯ ವರ್ಗಕ್ಕೂ, ಉಪಮೇಯರ್ ಸ್ಥಾನವು ಪರಿಶಿಷ್ಟ ಪಂಗಡ ಮಹಿಳೆಗೂ ಮೀಸಲಾಗಿರುವುದರಿಂದ ಮೇಯರ್ ಆಗಿ 7ನೇ ವಾರ್ಡ್ ನ ಸದಸ್ಯ ಕೆ.ಬಸವರಾಜ್ ಅವರು ಹಾಗೂ ಉಪಮೇಯರ್ ಆಗಿ 33ನೇ ವಾರ್ಡ್ ನ ಸದಸ್ಯೆ ಶ್ರೀಮತಿ ವಿಜಯಮ್ಮ ರಾಮಣ್ಣ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

____________________________________________

Mayor and Deputy Mayor selected  for second term

28-02-2009: Sri.K.Basavarj is declared as the Mayor and Smt.Vijayamma as the Deputy Mayor of the Bellary City Corporation for the second term.

                                 

                  K.BASAVARAJ                        VIJAYAMMA
                    MAYOR                          DEPUTY MAYOR
____________________________________________

Electoral Rolls of 197 ACs as of 01.01.2009 Published on 02.02.2009 - PDF format 
____________________________________________

ಮಹಾನಗರಪಾಲಿಕೆಯಲ್ಲಿ 60ನೇ ಗಣರಾಜ್ಯೋತ್ಸವ ಆಚರಣೆ  

26-ಜನವರಿ-2009:  ಬಳ್ಳಾರಿ ಮಹಾನಗರಪಾಲಿಕೆಯಲ್ಲಿ 60ನೇ ಗಣರಾಜ್ಯೋತ್ಸವವನ್ನು ಪಾಲಿಕೆ ಮೇಯರ್ ಶೋಭಾ ನಾರಾಯಣರವರಿಂದ ಧ್ವಜಾರೋಹಣದೊಂದಿಗೆ ಆಚರಿಸಲಾಯಿತು. 60th Republic Day ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ, ಉಪಮೇಯರ್ ಹಸೀನಾಬಿ, ಆಯುಕ್ತರು ಎಂ.ತಿಮ್ಮಪ್ಪ, ಕಛೇರಿ ಸಿಬ್ಬಂದಿ ವರ್ಗದವರು ಹಾಗೂ ಇನ್ನಿತರ ಸದಸ್ಯರುಗಳು ಹಾಜರಿದ್ದರು.  

60th Republic Day is celebrated in Bellary City Corporation where Mayor of the Corporation hoisted the flag.  Bellary City MLA G.Somashekhar Reddy, Deputy Mayor Haseenabee, Commisisoner M.Thimmappa, Corporation office staff and Corporators were also present for the occasion.

____________________________________________

ಮಹಾನಗರಪಾಲಿಕೆಗೆ ಬಿಡುಗಡೆಯಾಗಿರುವ 100ಕೋಟಿ ಅನುದಾನದಡಿಯಲ್ಲಿ ಒಂದನೆ ಹಂತದ 6 ಕಾಮಗಾರಿಗಳ ಭೂಮಿ ಪೂಜೆ  

25-ಜನವರಿ-2009:  ಬಳ್ಳಾರಿ ನಗರದ ಅಧಿದೇವತೆ  ಶ್ರೀ ಕನಕದುರ್ಗಮ್ಮ ದೇವಸ್ಥಾನದ ಹತ್ತಿರದ ಸರ್ಕಲ್ ನಿಂದ ಸುಧಾ ಸರ್ಕಲ್ ನವರೆಗೆ ರಸ್ತೆ ಅಗಲೀಕರಣ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಾಜ್ಯದ ಪ್ರವಾಸೋದ್ಯಮ, Bhoomi Poojaಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವ ಜಿ.ಜನಾರ್ದನರೆಡ್ಡಿ, ಬಳ್ಳಾರಿ ನಗರದ ರಸ್ತೆಯ ಅಭಿವೃದ್ಧಿ ಕಾರ್ಯಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರು 100 ಕೋಟಿ ರೂ.ಗಳ ಹಣವನ್ನು ಬಿಡುಗಡೆ ಮಾಡಿದ್ದಾರೆ.  ಮೊದಲ ಹಂತದಲ್ಲಿ 6 ರಸ್ತೆಗಳನ್ನು, ಆ ನಂತರ ಉಳಿದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಈ ಸಂದರ್ಭದಲ್ಲಿ   ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು,  ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ, ಜಿಲ್ಲಾBhoomi Poojaಧಿಕಾರಿ ಶಿವಪ್ಪ,  ಮೇಯರ್ ಶೋಭಾ ನಾರಾಯಣ, ಆಯುಕ್ತರು ಎಂ.ತಿಮ್ಮಪ್ಪ, ಉಪ ಮೇಯರ್ ಹಸೀನಾಬಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ, ಬಸವರಾಜ್, ಮಲ್ಲನಗೌಡ ಹಾಗೂ ಇನ್ನಿತರ ಸದಸ್ಯರುಗಳು ಹಾಜರಿದ್ದರು.  
____________________________________________

ಪಾಲಿಕೆ ಸಾಮಾನ್ಯ ಸಭೆ - ಕಸದಿಂದ ಇಂಧನ ತಯಾರಿಸುವ ಚಿಂತನೆ

12-ಜನವರಿ-2009:  ಕಸದ ತೊಟ್ಟಿಯಂತಿರುವ ನಗರವನ್ನು ಈ ಅಪಖ್ಯಾತಿಯಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಮಹಾ ನಗರ  ಪಾಲಿಕೆ ಯೋಜನೆಯೊಂದನ್ನು ರೂಪಿಸುತ್ತಿದ್ದು ಕಸದಿಂದ ಇಂಧನ ತಯಾರಿಸುವ ಚಿಂತನೆ ನಡೆಸಿದೆ.  ಸೋಮವಾರ ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಶಾಸಕ ಜಿ. ಸೋಮಶೇಖರ ರೆಡ್ಡಿ ಈ ಬಗ್ಗೆ ಮಾಹಿತಿ ನೀಡಿ, ಮಾರ್ಕೆಟ್ ಇಂಡಿಯಾ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆಯು ಈ ಕುರಿತು ಪಾಲಿಕೆಗೆ ಪತ್ರವೊಂದನ್ನು ಬರೆದಿದ್ದು ಕಸದಿಂದ ಇಂಧನ ಪರಿವರ್ತಿಸಲು ಆಸಕ್ತಿ ತೋರಿದೆ ಎಂದು ತಿಳಿಸಿದರು.   ಈ ಸಭೆಯಲ್ಲಿ ಮೇಯರ್ ಶೋಭಾ ನಾರಾಯಣ, ಆಯುಕ್ತರು ಎಂ.ತಿಮ್ಮಪ್ಪ, ಉಪ ಮೇಯರ್ ಹಸೀನಾಬಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ, ಬಸವರಾಜ್, ಮಲ್ಲನಗೌಡ ಹಾಗೂ ಇನ್ನಿತರ ಸದಸ್ಯರುಗಳು ಹಾಜರಿದ್ದರು.  

            ಕಸದಿಂದ ವಿದ್ಯುಚ್ಛಕ್ತಿ ಪರಿವರ್ತಿಸುವ ಫತಕ ವೀಕ್ಷಣೆಗೆ ಅಮೆರಿಕ ಪ್ರವಾಸ, ನಗರ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಮನೆ ಕಟ್ಟಿಕೊಂಡು ವಾಸಿಸುವವರಿಗೆ ಹಕ್ಕು ಪತ್ರ ನೀಡಿಕೆ, ಬೀದಿ ದೀಪ ವ್ಯವಸ್ಥೆ ಸುಗಮಗೊಳಿಸುವ ಸಲುವಾಗಿ 80 ಲಕ್ಷ ರೂ. ವೆಚ್ಚದಲ್ಲಿ ಫೇಸ್ ಅಳವಡಿಕೆ, ಹಂತ ಹಂತವಾಗಿ ವಿದ್ಯುತ್ ಕಂಬಗಳ ಪೂರೈಕೆ, ನಗರ ಹೊರವಲಯದ ಬಡಾವಣೆಗಳಲ್ಲಿ ಹೆಚ್ಚಿನ ಬೀದಿ ದೀಪಗಳ ಅಳವಡಿಕೆ ಇವು ಮೇಯರ್ ಶೋಭಾ ಅಧ್ಯಕ್ಷತೆಯಲ್ಲಿ ಮತ್ತು ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಉಪಸ್ಥಿತಿಯಲ್ಲಿ ನಡೆದ ಪಾಲಿಕೆ ಸಭೆಯ ಮುಖ್ಯಾಂಶಗಳು.

__________________________________________________

ಶಾಸಕ ಸೋಮಶೇಖರರೆಡ್ಡಿಯವರಿಂದ ಪಠ್ಯ ಪುಸ್ತಕಗಳ ವಿತರಣೆ

18-12-2008:  ಬಳ್ಳಾರಿ ಮಹಾನಗರ ಪಾಲಿಕೆಯು 2008-09 ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ 2.65 ಲಕ್ಷ ರೂ.ಗಳ ಮೊತ್ತದಲ್ಲಿ ಖರೀದಿಸಿದ ಪಠ್ಯ ಪುಸ್ತಕಗಳನ್ನು ನಗರ ಶಾಸಕ ಜಿ. ಸೋಮಶೇಖರರೆಡ್ಡಿಯವರು ವಿತರಿಸಿದರು.  ಈ ಸಂದರ್ಭದಲ್ಲಿ ಮಹಾಪೌರರಾದ ಶೋಭಾನಾರಾಯಣ, ಉಪ ಮಹಾಪೌರರಾದ ಹಸೀನಾಬೀ, ಪಾಲಿಕೆ ಆಯುಕ್ತ ಎಮ್.ತಿಮ್ಮಪ್ಪ ಹಾಗೂ ಇನ್ನಿತರರು ಉಪಸ್ಥಿತರಿದ್ದರು.  ವಿದ್ಯಾರ್ಥಿಗಳು ಈ ಪಠ್ಯ ಪುಸ್ತಕಗಳನ್ನು ಸದುಪಯೋಗ ಪಡೆದು, ಉತ್ತಮವಾಗಿ ಅಭ್ಯಾಸ ಮಾಡಿ ಚೆನ್ನಾಗಿ ಓದಿ  ಪ್ರಗತಿ ಸಾಧಿಸುವಂತೆ ಶಾಸಕರು ತಿಳಿಸಿದರು.

 

Distribution of Books

18-12-2008:  Books purchased worth Rs.2.65 laksh, were distributed to the SC/ST hostel students by Sri.G.Somashekhar Reddy, Bellary City MLA and said that the students should make use of this opportunity to the best effect by hard work and there by achieve their goals.  Bellary city corporation Mayor Smt.Shoba Narayanan, Deputy Mayor Smt.Haseena Bee, Commissioner Sri.M.Thimmappa and others were also present for the occasion.

1.20 ಕೋಟಿ ರೂ.ಗಳ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಸೋಮಶೇಖರ ರೆಡ್ಡಿ ಚಾಲನ

12-12-2008: ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿಯವರು ನಗರದ ವಾರ್ಡಿಗಳಲ್ಲಿನ ವಿವಿಧ ಪ್ರದೇಶಗಳಲ್ಲಿ 1.20 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವ ಸಿಮೆಂಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.  ನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ವಾರ್ಡ್ ಸಂಖ್ಯೆ 2, 3, 6, 9, 10, 12 ಗಳಲ್ಲಿನ ವಿವಿಧ ROAD WORKS INAUGURATIONಪ್ರದೇಶಗಳಲ್ಲಿ ಪ್ರತಿಯೊಂದು ವಾರ್ಡ್ ನಲ್ಲಿ ತಲಾ 20 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸಿಮೆಂಟ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದ್ದು, ಈ ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಶಾಸಕರು ಚಾಲನೆ ನೀಡಿದರು.

 

Inaguration of Road Works with 1.2 Crores expenditure

 12-12-2008: The cement road works under 1.2 Crores expenditure is inaugurated by Sri.G.Somashekhar Reddy, MLA (Bellary City) in ward numbers 2, 3, 6, 9, 10 and 12 at different places.  

______________________________________________

ಹಂಪಿ ಉತ್ಸವ 2008

Hampi Utsava 2008

_____________________________________________

ಬಳ್ಳಾರಿ ನಗರಕ್ಕೆ ಸಚಿವರ ಆಗಮನ 

23-10-2008:  ಮಾನ್ಯ ನಗರಾಭಿವೃದ್ಧಿ, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವರು, ಸನ್ಮಾನ್ಯ ಶ್ರೀ ಎಸ್.ಸುರೇಶ್ ಕುಮಾರ್ ಇವರು ದಿನಾಂಕ 24.10.2008 ರಂದು, ಬಳ್ಳಾರಿ ನಗರಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಮಹಾನಗರ ಪಾಲಿಕೆ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ, ಕೆ.ಯು.ಡಬ್ಲ್ಯು.ಎಸ್.ಡಿ.ಬಿ., ಕೆ.ಯು.ಐ.ಡಿ.ಎಫ್.ಸಿ.ಗೆ ಸಂಬಂಧಪಟ್ಟಂತೆ ಪರಿಶೀಲನಾ ಕಾರ್ಯಕ್ರಮ ಹಮ್ಮಿಕೊಂಡಿರುತ್ತಾರೆ.  

ಕಾರ್ಯಕ್ರಮಗಳ ವಿವರ

ಬೆ. 8.30 ರಿಂದ 10.30          

ನಗರ ಪರಿವೀಕ್ಷಣೆ    

ಬೆ. 10.30 ರಿಂದ ಮ. 01.30   

ಸಾರ್ವಜನಿಕ ಕುಂದು ಕೊರತೆಗಳ ವಿಚಾರಣೆ

ಮ. 02.30 ರಿಂದ ಮ. 4.00   

ಅಧಿಕಾರಿಗಳ ಸಭೆ   

ಮ. 04.00 ರಿಂದ ಸಂ. 04.30

ಪತ್ರಿಕಾ ಗೋಷ್ಠಿ      

ಸಂ. 04.30 ರಿಂದ ಸಂ. 06.00

ಜನಪ್ರತಿನಿಧಿಗಳೊಡನೆ ಸಮಾಲೋಚನೆ

__________________________________________________

ಮಹಾತ್ಮ ಗಾಂಧಿ ಪುತ್ಥಳಿ ಅನಾವರಣ

15-ಆಗಸ್ಟ್-2008 : ದೇಶದ 61ನೇ ಸ್ವಾತಂತ್ರ ದಿನೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ನಗರದ ಡಾ||ರಾಜ್ ಕುಮಾರ್ ಉದ್ಯಾನವನದಲ್ಲಿ ರಾಜ್ಯದ ಕಂದಾಯ ಸಚಿವ ಜಿ. ಕರುಣಾಕರರೆಡ್ಡಿಯವರು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪುತ್ಥಳಿಯನ್ನು ಅನಾವರಣ ಮಾಡಿದರು.  ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವರು ಹಾಗೂ ಜಿಲ್ಲಾ ಮಂತ್ರಿಯಾಗಿರುವ ಜಿ. ಜನಾರ್ಧನರೆಡ್ಡಿ, ಆರೋಗ್ಯ ಸಚಿವ ಬಿ. ಶ್ರೀ ರಾಮುಲು, ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರರೆಡ್ಡಿ, ಕಂಪ್ಲಿ ಶಾಸಕ ಟಿ.ಹೆಚ್. ಸುರೇಶ್ ಬಾಬು, ಪಾಲಿಕೆ ಮೇಯರ್ ಶೋಭಾ ನಾರಾಯಣ್, ಉಪಮೇಯರ್ ಹಸೀನಾಬಿ, ಜಿಲ್ಲಾಧಿಕಾರಿ ಬಿ. ಶಿವಪ್ಪ ಮತ್ತಿತರೆ ಪ್ರಮುಖರು ಉಪಸ್ಥಿತರಿದ್ದರು.  ಇದೇ ಸಮಯದಲ್ಲಿ ಭಾರತ ಮಾತೆಯ ಪುತ್ಥಳಿಯನ್ನು ಸಹ ಸಚಿವರು ಉದ್ಯಾನವನದಲ್ಲಿ ಅನಾವರಣಗೊಳಿಸಿದರು.

Inauguration of Mahatma Gandhi statue
 

15-Aug-2008:  On the occasion of 61st anniversary of Independence day, the statue of Mahatma Gandhi (father of the nation) was inaugurated in Dr||Rajkumar Park by state Revenue Minister G.Karunakar Reddy.  Bellary District Minister and  Minister for Tourism and Infrastructure Development G.Janardhan Reddy, Health Minister B.Sriramulu, Bellary City MLA G.Somashekhar Reddy, Kampli MLA T.H.Suresh Babu, Corporation Mayor Shobha Narayan, Deputy Mayor Hasinabee, Deputy Commissioner B.Shivappa and others were also present on the occasion.

__________________________________________________

61ನೇ ಸ್ವಾತಂತ್ರ ದಿನಾಚರಣೆ

15-ಆಗಸ್ಟ್-2008 :  61ನೇ ಸ್ವಾತಂತ್ರ ದಿನಾಚರಣೆಯನ್ನು ಮಹಾನಗರಪಾಲಿಕೆಯಲ್ಲಿ ಮಾನ್ಯ ಮಹಾಪೌರರು ಧ್ವಜಾರೋಹಣದೊಂದಿಗೆ ಆಚರಿಸಲಾಯಿತು.  ಈ ಸಂದರ್ಭದಲ್ಲಿ ಮಾನ್ಯ ಶಾಸಕರು ಬಳ್ಳಾರಿ ನಗರ ಶ್ರೀ ಜಿ.ಸೋಮಶೇಖರರೆಡ್ಡಿರವರು, ಪಾಲಿಕೆ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

INDEPENDENCE DAY celebration in the Corporation 
 

15-Aug-2008:  61st anniversary of Independence day was celebrated in Bellary City Corporation premises. The Corporation Mayor hoisted the flag.  Bellary City MLA Sri.G.Somashekhar Reddy, Corporators and office staff were also present on the occasion. The event was also celebrated at Narayana Rao Park, Fort booster and Sanitation office near first gate.

__________________________________________________

ಮಹಾನಗರ ಪಾಲಿಕೆಯಲ್ಲಿ ತುರ್ತು ಸಭೆ  

12-ಆಗಸ್ಟ್-2008: ಸಾರ್ವಜನಿಕರ ಸಮಸ್ಯೆಗಳ ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ತುರ್ತು ಸಭೆಯನ್ನು ಕರೆಯಲಾಯಿತು.  ಕಾಂಪೊಸ್ಟ್ ಯಾರ್ಡ್ ನ್ನು ನಗರದಿಂದ ಸುಮಾರು 15 ರಿಂದ 20 ಕಿ.ಮೀ. ದೂರದಲ್ಲಿ ಸ್ಥಳವನ್ನು ಗುರುತಿಸಿ ಸ್ಥಳಾಂತರಿಸುವುದು, ಘನತಾಜ್ಯ ವಸ್ತುಗಳ ನಿರ್ವಹಣೆಯಲ್ಲಿ ಮನೆ-ಮನೆ ಕಸ ಸಂಗ್ರಹಣೆ ಮಾಡಿ ಅದರ ಬಾಬ್ತುವನ್ನು ಸಾರ್ವಜನಿಕರಿಂದ ಪಡೆಯುವುದು, ಚಿಕನ್ ಗೂನ್ಯ ಹಾಗೂ ಡೆಂಗುವಿನ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಈ ರೋಗಗಳನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಪಾಂಪ್ಲೆಟ್ ಗಳನ್ನು ವಿತರಿಸುವುದು ಹಾಗೂ ಇನ್ನಿತರೆ ವಿಷಯಗಳ ಬಗ್ಗೆ ಸಭೆಯಲ್ಲಿ ತೀರ್ಮಾನವನ್ನು ತೆಗೆದು ಕೊಳ್ಳಲಾಯಿತು.  ಮಾನ್ಯ ಬಳ್ಳಾರಿ ನಗರದ ಶಾಸಕರು ಶ್ರೀ ಜಿ.ಸೋಮಶೇಖರ ರೆಡ್ಡಿ, ಪಾಲಿಕೆಯ ಮೇಯರ್, ಉಪ ಮೇಯರ್ ಹಾಗೂ ಪಾಲಿಕೆ ಸದಸ್ಯರುಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

 12-Aug-2008: An emergency meeting was called in Bellary City Corporation about public grievances and development works.  Decisions were taken for shifting of compost yard to about 15 to 20 km from the city,  regular door-to-door collection under Solid Waste Management, distribution of pomplets about precautionary measures to the diseases like chikungunya and dengue, and other subjects.  Bellary City MLA Sri.G.Somashekhar Reddy, City Corporation Mayor, Deputy Mayor and Corporators were present for the meeting

__________________________________________________

 
Birth and Death is now online
 

03-09-2007:  irth and Death online application is launched today.  The citizens can view the details of birth and death from the year 1996 to 2005 ( entry of records from the year 2006 to till date is under process) by visiting the link Birth/Death on the left pane OR click here.

___________________________________________________________________

 

          City Budget 2008-09  
 
 
Opening Balance           :     Rs.  4,15,28,012
Receipts                         :     Rs.94,12,58,948
Total                               :    Rs.98,27,86,960
Total Expenditure          :     Rs.94,39,84,191
Closing Balance             :     Rs.  3,88,02,769
 
Over All View Of Development Works
A) Roads: 6.5 crores, Drains : 1.3 crores

B) Water works
          PVC Pipes purchasing - 85 lakhs
          UGD works - 40 lakhs
          Borewell repairs and materials - 15 lakhs

C) Lightings : 2.05 crores

D) Buildings : 2 Crores
          Commerical complex construction - 50 lakhs
          Residential quarters - 50 lakhs
          Vegetable market construction - 50 lakhs
          Compound construction for various places - 50 lakhs

E) Development of Parks - 1 crore

F) Roads beautification - 1 crore

G) Self-employment and training for economically backward category (general) women - 50 lakhs

H) Distribution of equipments for physically handicaped - 35 lakhs

I) Purchasing of heavy vehicles for Solida Waste Management and other light vehicles - 1.03 crores

___________________________________________________________________

ಸಚಿವರು, ಶಾಸಕರಿಗೆ ಪಾಲಿಕೆಯ ವತಿಯಿಂದ ಪೌರಸನ್ಮಾನ

14-ಜುಲೈ-2008: ಬಳ್ಳಾರಿ ಮಹಾನಗರ ಪಾಲಿಕೆಯ ವತಿಯಿಂದ ಪೌರಸನ್ಮಾನ ಕಾರ್ಯಕ್ರಮವನ್ನು ಜು. 14ರಂದು ಸಂಜೆ ಬಳ್ಳಾರಿ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿತ್ತು. ಮಹಪೌರ ಬಿ.ಶೋಭಾ ಆಧ್ಯಕ್ಷೆತೆ ವಹಿಸಿದ್ದರು. ಜಿಲ್ಲಾ ಪಂಚಾಯತಿ ಆಧ್ಯಕ್ಷ ಪುಷ್ಪರೇಖಾ, ಮಹಾನಗರ ಪಾಲಿಕೆಯ ಉಪಮಹಾಪೌರೆ ಹಸೀನಾಬೀ, ಪಾಲಿಕೆಯ ಲೆಕ್ಕಪತ್ರ ಸ್ದಾಯಿ ಸಮಿತಿ ಆಧ್ಯಕ್ಷ ಇಬ್ರಾಹಿಂ,ಹಣಕಾಸು ಮತ್ತು ಆಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಬಸವರಾಜ್, ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಮಲ್ಲನಗೌಡ ಅತಿಥಿಗಳಾಗಿದ್ದರು.

ಸನ್ಮಾನ : ಜಿಲ್ಲಾ ಉಸ್ತುವಾರಿ ಸಚಿವ  ಜಿ.ಜನಾರ್ದನ ರೆಡ್ಡಿ, ಕಂದಾಯ ಸಚಿವ ಜಿ.ಕರುಣಾಕರ ರೆಡ್ಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಬಳ್ಳಾರಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಕೂಡ್ಲಿಗಿ ಶಾಸಕ ಬಿ.ನಾಗೇಂದ್ರ, ಕಂಪ್ಲಿ ಶಾಸಕ ಟಿ.ಎಚ್.ಸುರೇಶ್ ಬಾಬು ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

___________________________________________________________________

ಪಾಲಿಕೆ ಸಾಮಾನ್ಯ ಸಭೆ ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲು ಒತ್ತಾಯ

11-ಜುಲೈ-2008:  ಬಳ್ಳಾರಿ ನಗರದಲ್ಲಿ ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಕೆ ಮಾಡಬೇಕು, ನೀರಿನ ಸೋರಿಕೆ ತಡೆಗಟ್ಟಬೇಕು, ಪಾಲಿಕೆಯ ಮತ್ತು ಜಲ ಮಂಡಳಿಗಳ ನಡುವೆ ಸೌಹಾರ್ದತೆಯ ಸಂಪರ್ಕ ಮಾಡಿ ಸೂಕ್ತ ರೀತಿಯಲ್ಲಿ ನೀರು ಸರಬರಾಜು ನಡೆಯುವಂತೆ ನೋಡಿಕೊಳ್ಳಬೇಕು ಎಂದು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರೆಲ್ಲರೂ ಮನವಿ ಮಾಡಿದರು.  ಇದೇ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಜಿ.ಸೋಮಶೇಖರರೆಡ್ಡಿರವರು ಬಳ್ಳಾರಿ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊಳವೆ ಬಾವಿಗಳ ದುರಸ್ತಿ ಕಾರ್ಯ ಸಮರ್ಪಕ ರೀತಿಯಲ್ಲಿ ಕೈಗೊಂಡು, ಪ್ಲೋರೈಡ್ ಅಂಶವಿಲ್ಲದಂತೆ ಶುದ್ಧವಾದ ನೀರು ಸರಬರಾಜು ಮಾಡಲು ಅಧಿಕಾರಿಗಳು ಗಮನ ಹರಿಸುವಂತೆ ಸೂಚನೆ ನೀಡಿದರು

___________________________________________________________________

 

ಬಳ್ಳಾರಿ  ಮಹಾನಗರಪಾಲಿಕೆಯ ಪ್ಪಪ್ರಥಮ ಸಾಮಾನ್ಯ ಸಭೆ

27-03-2008: ಬಳ್ಳಾರಿ  ಮಹಾನಗರಪಾಲಿಕೆಯ ಪ್ಪಪ್ರಥಮ ಸಾಮಾನ್ಯ ಸಭೆಯು ಇಂದು ನಡೆದು ಸಭೆಯಲ್ಲಿ ಹಲವಾರು ಅಭಿವೃದ್ಧಿಪರ ಕಾಮಗಾರಿಗಳ ವಿಷಯಗಳಿಗೆ ಅನುಮೋದನೆ ನೀಡಲಾಯಿತು.  ನಗರದಲ್ಲಿ ಹದಗೆಟ್ಟು ಹಾಳಾಗಿರುವ ರಸ್ತೆಗಳ  ದುರಸ್ತಿ, ವಿದ್ಯುತ್ ಕಣ್ಣಾ ಮುಚ್ಚಾಲೆ, ಉದ್ಯಾನವನಗಳ ಅಭಿವೃದ್ಧಿ, ಪಾರ್ಕ್ ಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ, ಸ್ಮಶಾನಗಳನ್ನು ಮತ್ತು ಪಾರ್ಕ್ ಗಳನ್ನು ಅಭಿವೃದ್ಧಿಪಡಿಸಿ ಅದರ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಲು ಸಹ ತೀರ್ಮಾನಿಸಲಾಯಿತು.

_______________________________________________________________

ಚುನಾವಣೆ 2008 ರ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Click here for General Elections 2008 details

 

ಭಾರತೀಯ ಚುನಾವಣ ಆಯೋಗದ ವೆಬ್ ಸೈಟ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

Click here for Election Commission of India website

 

Mayor and Deputy Mayor declared

20-02-2008: Smt.B.Shobha is declared as the Mayor and Smt.Haseena Bee as the Deputy Mayor of the Bellary City Corporation.

                               

                         B.Shobha                      Haseena Bee

 

For full information of all 35 corporators click here.

 

ಮಹಾನಗರ ಪಾಲಿಕೆಗೆ ನೂತನವಾಗಿ ಆಯ್ಕೆಯಾದ ಸದಸ್ಯರ ಪಟ್ಟಿ

Click here for list of Corporators elected for Bellary City Corporation for 2007-08

 

ಹಂಪಿಗೆ ಗೌರವಾನ್ವಿತ ರಾಷ್ಟ್ರಪತಿಯವರ ಐತಿಹಾಸಿಕ ಭೇಟಿ

04-02-2008: ದಿನಾಂಕ 03-02-2008 ಭಾನುವಾರದಂದು ಗೌರವಾನ್ವಿತ ರಾಷ್ಟ್ರಪತಿ ರವರಾದ ಶ್ರೀಮತಿ ಪ್ರತಿಭಾದೇವಿ ಸಿಂಗ್ ಪಾಟೀಲ್ ರವರು ವಿಶ್ವ ವಿಖ್ಯಾತ ಹಂಪಿಗೆ ಭೇಟಿ ನೀಡಿ ಭವ್ಯ ಪರಂಪರೆ ಸ್ಮಾರಕಗಳನ್ನು ವೀಕ್ಷಿಸಿದರು.

                 More photos

 

___________________________________________________________________

ಪಲ್ಸ್ ಪೊಲಿಯೋ ಕಾರ್ಯಕ್ರಮ

ಬಳ್ಳಾರಿ ನಗರದಲ್ಲಿ ಪಲ್ಸ್ ಪೊಲಿಯೋ ಕಾರ್ಯಕ್ರಮವನ್ನು ದಿನಾಂಕ 10-02-2008 ರಂದು ಹಮ್ಮಿಕೊಳ್ಳಲಾಗಿದೆ.  ಸಾರ್ವಜನಿಕರು ತಮ್ಮ ಮಕ್ಕಳನ್ನು ಪೊಲಿಯೋ ಮುಕ್ತರನ್ನಾಗಿಸಲು ಈ ಸದವಕಾಶವನ್ನು ಉಪಯೊಗಿಸಿಕೊಳ್ಳಬೇಕೆಂದು ವಿನಂತಿಸಲಾಗಿದೆ.

                             ಆಯುಕ್ತರು, ಬಳ್ಳಾರಿ ಮಹಾನಗರಪಾಲಿಕೆ.

 

Pulse Polio immunisation programme in the City

07-01-2008: ulse Polio Immunisation program in Bellary city will be  conducted on 10th February 2008 at selective booths for polio eradication.  All the citizens are requested to please make full use of the programme.

                                      Commissioner, Bellary City Corporation.

___________________________________________________________________

ರಸ್ತೆ ಅಪಘಾತದಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀ ಎಸ್.ಹೆಚ್.ಚೌಧರಿ ಹಾಗೂ ಅವರ ಪತ್ನಿ ನಿಧನ

22-11-2007: ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀ ಎಸ್.ಹೆಚ್.ಚೌಧರಿ ಅವರು ತಮ್ಮ ಧರ್ಮಪತ್ನಿಯವರೊಂದಿಗೆ ಇಂದು ಬೆಳಿಗ್ಗೆ ಬಳ್ಳಾರಿಯಿಂದ ಇಂಡಿಕಾ ಕಾರಿನಲ್ಲಿ ರಾಯಚೂರಿಗೆ ಹೋಗುತ್ತಿದ್ದಾಗ ಸಿಂಧನೂರಿನ ಹತ್ತಿರ ಪೆಟ್ರೋಲ್ ಬಂಕ್ ಸಮೀಪ ಮಿನಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಚೌಧರಿಯವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅವರ ಪತ್ನಿಯನ್ನು ಸಿಂಧನೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿ ತದನಂತರ ತುರ್ತು ಚಿಕಿತ್ಸೆಗಾಗಿ ಇವರನ್ನು ಅಂಬುಲೆನ್ಸ್ ನಲ್ಲಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ನಿರ್ಮಲಚೌಧರಿಯವರು ಬೆಳಿಗ್ಗೆ 11-30 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.  ಈ ಸುದ್ದಿ ತಿಳಿದ ಪಾಲಿಕೆಯ ಸಿಬ್ಬಂದಿ ವರ್ಗದವರು ದಿಗ್ಭ್ರಮೆಗೊಳಗಾಗಿದ್ದು ತೀವ್ರ ಸಂತಾಪ ಸೂಚಿಸಿದ್ದಾರೆ.

___________________________________________________________________

Registration/Reneval of licensed Engineer and Supervisor for the year 2007-08 - Orders Issued

___________________________________________________________________

 
City Budget 2007-08:    click here for details
 
Over All View Of Development Works
 
A) Roads: 8.65 crores
    Cement works 0.98 crores
    Beautification of city 0.10crores
    Road side drains Rs 1.72 crores
    C.C.Drains Rs 1.25 crore
    Roads under KUIDFC Rs 2.38 crores
    Development works 2006-07 in WIP Rs 3.56 crores
 
B) Water works
    Water works under KUIDFC Rs 1.37 crores
    Water works proposed Rs 0.85 crores
    Water works of 2006-07 in WIP 0.28crores

C) Lightings
    Lightings proposed Rs 0.75 crores
    Lighting works of 2006-07 in WIP Rs 0.29 crores

D) Buildings
    New Floor & interior proposed Rs 1.24 crores
    Development of Markets Rs 0.40 crores
   Guest house & Residential quarters for employees Rs 0.50crores
    Toilets – 0.39 crores

E) Development of Parks and Playgrounds Rs 0.70 crores
Development works 2006-07 in WIP Rs 0 .08 crores

F) Solid waste management Rs 0.18 crores ear marked for containers tools & equipment
______________________________________________________________________