|
|
|
|
ಪಾಲಿಕೆ
ವಾಣಿ
|
CORPORATION News
|
|
|
ಸಚಿವರಿಂದ
ಬಳ್ಳಾರಿ ನಗರ ಪರಿವೀಕ್ಷಣೆ ಮತ್ತು ಪರಿಶೀಲನೆ
07-12-2009: ಮಾನ್ಯ ನಗರಾಭಿವೃದ್ಧಿ, ಕಾನೂನು ಮತ್ತು ಸಂಸದೀಯ ವ್ಯವಹಾರ
ಸಚಿವರು, ಸನ್ಮಾನ್ಯ ಶ್ರೀ ಎಸ್.ಸುರೇಶ್ ಕುಮಾರ್ ಇವರು ದಿನಾಂಕ
07.12.2009
ರಂದು, ಬಳ್ಳಾರಿ ನಗರದ ಪರಿವೀಕ್ಷಣೆ ನಡೆಸಿ
ಡಾ||ರಾಜ್ ಕುಮಾರ್ ಉದ್ಯಾನವನಕ್ಕೆ ಭೇಟಿ ನೀಡಿದರು. ತದನಂತರ ಜಿಲ್ಲಾಧಿಕಾರಿರವರ
ಸಭಾಂಗಣದಲ್ಲಿ
ಬಳ್ಳಾರಿ ಮಹಾನಗರ ಪಾಲಿಕೆ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ,
ಕೆ.ಯು.ಡಬ್ಲ್ಯು.ಎಸ್.ಡಿ.ಬಿ. ಮತ್ತು ಕೆ.ಯು.ಐ.ಡಿ.ಎಫ್.ಸಿ.ಗೆ ಸಂಬಂಧಪಟ್ಟ
ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ಜರುಗಿಸಿದರು.
__________________________________________________
|
|
ಬಳ್ಳಾರಿ ನಗರಕ್ಕೆ
ನಗರಾಭಿವೃದ್ಧಿ ಸಚಿವರ ಆಗಮನ
05-12-2009: ಮಾನ್ಯ ನಗರಾಭಿವೃದ್ಧಿ, ಕಾನೂನು ಮತ್ತು ಸಂಸದೀಯ ವ್ಯವಹಾರ
ಸಚಿವರು, ಸನ್ಮಾನ್ಯ ಶ್ರೀ ಎಸ್.ಸುರೇಶ್ ಕುಮಾರ್ ಇವರು ದಿನಾಂಕ
07.12.2009 ರಂದು,
ಬಳ್ಳಾರಿ ನಗರಕ್ಕೆ
ಸಂಬಂಧಿಸಿದಂತೆ ಬಳ್ಳಾರಿ ಮಹಾನಗರ ಪಾಲಿಕೆ, ಬಳ್ಳಾರಿ
ನಗರಾಭಿವೃದ್ಧಿ ಪ್ರಾಧಿಕಾರ, ಕೆ.ಯು.ಡಬ್ಲ್ಯು.ಎಸ್.ಡಿ.ಬಿ., ಕೆ.ಯು.ಐ.ಡಿ.ಎಫ್.ಸಿ.ಗೆ
ಸಂಬಂಧಪಟ್ಟಂತೆ ಪರಿಶೀಲನಾ ಕಾರ್ಯಕ್ರಮ ಹಮ್ಮಿಕೊಂಡಿರುತ್ತಾರೆ.
ಕಾರ್ಯಕ್ರಮಗಳ ವಿವರ
|
ಬೆ.
8.30 ರಿಂದ 10.30
|
ನಗರ ಪರಿವೀಕ್ಷಣೆ
|
|
ಮ.
10.30 ರಿಂದ ಮ.
1.30
|
ಅಧಿಕಾರಿಗಳ ಸಭೆ
|
|
ಸಂ. 03.30 ರಿಂದ ಸಂ. 04.00
|
ಜನಪ್ರತಿನಿಧಿಗಳೊಡನೆ ಸಮಾಲೋಚನೆ
|
|
ಮ. 04.00 ರಿಂದ ಸಂ. 04.30
|
ಪತ್ರಿಕಾ ಗೋಷ್ಠಿ
|
__________________________________________________
|
|
ಪಾಲಿಕೆಗೆ
ಕಸ ಸಂಗ್ರಹಣಾ ಆಟೋ ಟಿಪ್ಪರ್ ದಾನ
17-ಅಕ್ಟೋಬರ್-2009 :
ಬಳ್ಳಾರಿ ನಗರ ಶಾಸಕರು ಹಾಗೂ ರಾಜ್ಯ ಹಾಲು ಒಕ್ಕೂಟದ ಅಧ್ಯಕ್ಷರಾದ
ಜಿ.ಸೋಮಶೇಖರರೆಡ್ಡಿ ಯವರು ಮಹಾನಗರಪಾಲಿಕೆಗೆ ಎರಡು ಕಸ ಎತ್ತುವ ಆಟೋ
ಟಿಪ್ಪರ್ ಗಳನ್ನು ವಿಶ್ವಭಾರತಿ ಕಲಾನಿಕೇತನ ಅವರ ಹೆಸರಿನಲ್ಲಿ ರೂ.4.30 ಲಕ್ಷ ವೆಚ್ಚದಲ್ಲಿ
ವಾಹನಗಳನ್ನು ಪಾಲಿಕೆಗೆ ದಾನವಾಗಿ ನೀಡಿದರು. ಬಳ್ಳಾರಿ ನಗರದಲ್ಲಿ ಕಸ ಎತ್ತಲು
ಚಿಕ್ಕ-ಚಿಕ್ಕ ಸಂದುಗಳಲ್ಲಿ ಈ ಆಟೋ ಕಸ ಎತ್ತಲು ಸುಲಭವಾತಿರುತ್ತದೆಂದು ಹಾಗೂ ಸುಮಾರು 500
ಕೆ.ಜಿ. ಕಸವನ್ನು ಹೊತ್ತುಕೊಂಡು ಹೋಗಲು ಅನುಕೂಲವಾತಿರುತ್ತದೆಂದು ಒಂದು ಲೀಟರ್ ಗೆ 36
ಕಿ.ಮೀ. ಚಲಿಸುತ್ತದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತರಾದ
ಎಂ.ತಿಮ್ಮಪ್ಪ ರವರು ಹಾಗೂ ಮಹಾನಗರ ಪಾಲಿಕೆಯ ಮಹಾಪೌರರಾದ ಕೆ.ಬಸವರಾಜ್ ಹಾಗೂ ಸ್ಥಾಯಿ
ಸಮಿತಿಯ ಅಧ್ಯಕ್ಷರುಗಳಾದ ಪದ್ಮಾವತಿ ಯವರು, ಇಬ್ರಾಹಿಂ ಬಾಬುರವರು, ಗೋವಿಂದರಾಜುಲು ಹಾಗೂ
ಸದಸ್ಯರುಗಳಾದ ಮಲ್ಲನಗೌಡ ರವರು ಉಪಸ್ಥಿತರಿದ್ದರು.
____________________________________________
|
|
ಬಳ್ಳಾರಿ ನಗರದಲ್ಲಿ ಮಳೆರಾಯನ ಆರ್ಭಟ
05-ಅಕ್ಟೋಬರ್-2009 :
ಬಳ್ಳಾರಿ ನಗರದಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ಸುರಿದ ನಿರಂತರ
ಭಾರಿ
ಮಳೆಯಿಂದಾಗಿ ಅಪಾರ ಪ್ರಮಾಣದ ನಷ್ಟವಾಗಿದೆ ಹಾಗೂ ಸಾರ್ವಜನಿಕರು ತತ್ತರಿಸುವಂತಾಗಿದೆ. ವಾಹನ
ಸಂಚಾರಕ್ಕೆ ತುಂಬಾ
ಅಡಚಣೆಯುಂಟಾಗಿದೆ .
ಕೆಲವು ಪ್ರದೇಶಗಳಲ್ಲಿ ರಸ್ತೆಗಳಲ್ಲಿ ಹಾಗೂ ಮನೆಗಳಲ್ಲಿ ಮಳೆ ನೀರು
ಅಪಾರ ಪ್ರಮಾಣದಲ್ಲಿ ಹರಿದು
ಬಂದಿರುವುದರಿಂದ ಜನರ ಜೀವನ ಅಸ್ತವ್ಯಸ್ತವಾಗಿದೆ.
More
photos
____________________________________________
|
|
____________________________________________
|
|
63ನೇ
ಸ್ವಾತಂತ್ರ ದಿನಾಚರಣೆ
15-ಆಗಸ್ಟ್-2009 :
63ನೇ
ಸ್ವಾತಂತ್ರ ದಿನಾಚರಣೆಯನ್ನು
ಮಹಾನಗರಪಾಲಿಕೆಯಲ್ಲಿ
ಮಾನ್ಯ ಮಹಾಪೌರರು ಧ್ವಜಾರೋಹಣದೊಂದಿಗೆ ಆಚರಿಸಲಾಯಿತು. ಈ ಸಂದರ್ಭದಲ್ಲಿ
ಮಾನ್ಯ ಕರ್ನಾಟಕ ಹಾಲಿನ ಒಕ್ಕೂಟದ ಅಧ್ಯಕ್ಷರು ಹಾಗೂ ಶಾಸಕರು ಬಳ್ಳಾರಿ ನಗರ ಶ್ರೀ ಜಿ.ಸೋಮಶೇಖರರೆಡ್ಡಿರವರು, ಪಾಲಿಕೆ ಸದಸ್ಯರು ಹಾಗೂ
ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
INDEPENDENCE DAY celebration in the Corporation
15-Aug-2009:
63st
anniversary of Independence day was celebrated in Bellary City
Corporation premises. The Corporation Mayor hoisted the
flag. KMF Chairman and Bellary City MLA Sri.G.Somashekhar Reddy, Corporators
and office staff were also present on the occasion. The
event was also celebrated at Narayana Rao Park, Fort booster and
Sanitation office near first gate.
____________________________________________
|
|
Important:
Click here to know all
about SWINE FLU (H1N1)
____________________________________________
|
|
Public Notification - Revised SAS Tax Rates from the financial
year 2009-10
____________________________________________
|
|
ಪಾಲಿಕೆಯ
ಸಾಮಾನ್ಯ ಸಭೆ
15-06-2009:
ಬಳ್ಳಾರಿ ನಗರ ಪಾಲಿಕೆ
ವ್ಯಾಪ್ತಿಯಲ್ಲಿ
ನೀರಿನ ಕರವನ್ನು ಪಾವತಿಸಲು ನಾಗರೀಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ
ನಗರದಲ್ಲಿ ಇನ್ನೂ 3-4 ಪ್ರದೇಶಗಳಲ್ಲಿ ನೀರಿನ ಕರ ಪಾವತಿ ಕೇಂದ್ರ ತೆರೆಯಲು
ಹಾಗೂ ಕರವಸೂಲಿ ಕಾರ್ಯವನ್ನು ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳಲು ಖಾಸಗಿ
ಗುತ್ತಿಗೆದಾರರಿಗೆ ವಹಿಸಲು ನಗರಪಾಲಿಕೆಯು ಒಪ್ಪಿಗೆ ನೀಡಿದೆ.
ಮಹಾನಗರಪಾಲಿಕೆಯ ಸಭಾಂಗಣದಲ್ಲಿಂದು ಮಧ್ಯಾಹ್ನ ನಡೆದ ಸಾಮಾನ್ಯ ಸಭೆಯಲ್ಲಿ,
ಮಹಾಪೌರರ ಅನುಮತಿಯ ಮೇರೆಗೆ ಇತರೆ ವಿಷಯಗಳ ಬಗ್ಗೆ ನಡೆದ ಚರ್ಚೆಯ
ಸಂದರ್ಭದಲ್ಲಿ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಬಾಬು ಅವರು ಈ
ಕುರಿತು ಪ್ರಸ್ತಾವಿಸಿ ನಗರದಲ್ಲಿ 42 ಸಾವಿರ ಅಧಿಕೃತ ನಳಗಳ ಸಂಪರ್ಕಗಳಿವೆ.
ಅಂತೆಯೇ ಸಾವಿರಾರು ಅನಧಿಕೃತ ನಲ್ಲಿಗಳ ಸಂಪರ್ಕಗಳಿದ್ದು, ಅವುಗಳನ್ನು
ಸಕ್ರಮಗೊಳಿಸಿ, ದಂಡ ಕಟ್ಟಿಸಿಕೊಳ್ಳುವ ಹಾಗೂ ವಿದ್ಯುತ್ ಶುಲ್ಕ ಪಾವತಿಸುವ
ಮಾದರಿಯಲ್ಲಿ ಪ್ರತಿ ತಿಂಗಳೂ ನೀರಿನ ಸಂಪರ್ಕ ಪಾವತಿಸಲು, ಶುಲ್ಕ ವಸೂಲಿ
ಮಾಡಲು ಅನುವಾಗುವಂತೆ ಖಾಸಗಿಯವರಿಗೆ ಗುತ್ತಿಗೆ ನೀಡಲು ತಿಳಿಸಿದಾಗ ಸಭೆಯು
ಒಪ್ಪಿಗೆ ಸೂಚಿಸಿತು.
ಮೋಕಾ ಬಳಿ ಮತ್ತೊಂದು ಕೆರೆ ನಿರ್ಮಾಣಕ್ಕೆ ನಿರ್ಧಾರ, ವಿದ್ಯುತ್ ಕಣ್ಣಾ
ಮುಚ್ಚಲೆ ಯಾಟದ ಬಗ್ಗೆ ಪಾಲಿಕೆ ಸಭೆಯಲ್ಲಿ ಸದಸ್ಯರ ತೀವ್ರ ಅಸಮಾಧಾನ ಹಾಗೂ
ಇನ್ನೀತರೆ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಆರೋಗ್ಯ ಸಚಿವ
ಬಿ.ಶ್ರೀರಾಮುಲುರವರು, ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ,
ಮಹಾಪೌರರು ಬಸವರಾಜ್, ಉಪಮಹಾಪೌರರು ವಿಜಯಮ್ಮ, ಸ್ಥಾಯಿ ಸಮಿತಿ
ಅಧ್ಯಕ್ಷರುಗಳು, ಇತರೆ ಸದಸ್ಯರುಗಳು, ಪಾಲಿಕೆ ಅಧಿಕಾರಿಗಳು
ಉಪಸ್ಥಿತರಿದ್ದರು.
____________________________________________
|
|
|
Bellary is
one of 57 Karnataka cities in the Nirmala Nagara - Municipal
eGovernance project. On Aug 15th 2005 each of the 57 cities will get a
comprehensive website as well as the Public Grievance &
Redressal module. Other important modules to be launched are Property
Tax, Financial Accounting GIS Mapping, Birth & Death
Certification, and Ward Works. Nirmala Nagara project is a partnership
between the
Urban Development Dept,
eGovernments Foundation & Survey of India. These computer
based systems coupled with Govt. process re-engineering and GIS digital
mapping will provide transparency and accountability and smoother
delivery of services to citizens of Karnataka. Your feedback and inputs
are greatly appreciated. Please send inputs to
contact@egovernments.org
|
|
Bellary takes its name from the word Balari which
refers to goddess Durugamma as this goddess had manifested herself in
the town. Bellary city with a population of about 3.17 Lakhs as per
2001 census, is the 7th largest city in Karnataka State. With the
commencement of construction of several steel plants in the district,
the city promises to be "The Jamshedpur
of Karnataka"
in the 21st Century. The city was ruled by several well known dynasties
such as the Sathavahanas, Kadamabas, Chalukyas, Rashtrakutas, Gangas,
Chalukyas of Kalyana, KalaChuryas & Hoysalas and thereafter it
became the territory of Vijaynagar rulers.
|
|
The city also has significant
small-scale industrial activity and is one of the major centres of
Jeans manufacturing in the country, and it is the second largest city
in Asia in manufacturing ready-made garments. The city is well
connected by road and train which is just 305 KM from the capital city
of Karnataka i.e. Bangalore.
|
 |
|
|
|
|
|